ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ರಕ್ಷಾಬಂಧನ ಸಂಭ್ರಮ! ❤️✨ ಸಹೋದರಿ ನಂದಿನಿ ರಾಹುಲ್ ಬೆಂಗಳೂರಿನ ಯಶ್ ನಿವಾಸಕ್ಕೆ ಭೇಟಿ ನೀಡಿ ಸಹೋದರನೊಂದಿಗೆ ರಕ್ಷಾಬಂಧನ ಆಚರಿಸಿದ್ದಾರೆ.
ಅಣ್ಣ–ತಂಗಿಯ ಬಾಂಧವ್ಯವನ್ನು ಸಂಭ್ರಮಿಸುವ ಈ ವಿಶೇಷ ದಿನದಂದು ಕುಟುಂಬದೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆದಿದ್ದಾರೆ. ಯಶ್ ಮತ್ತು ನಂದಿನಿ ಅವರ ರಕ್ಷಾಬಂಧನ ಸಂಭ್ರಮದ ಕ್ಷಣಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. 🥰
VK Readers
ಕನ್ನಡ ಮಾಧ್ಯಮದ ಲೋಕದಲ್ಲಿ ನಂ.1 ದಿನಪತ್ರಿಕೆ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ವಿಶ್ವದಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಿನಿಮಾದಲ್ಲಿ ಯಶ್ ಅವರ ಸ್ಟೈಲಿಶ್ ಅಭಿನಯ, ಆ್ಯಕ್ಷನ್, ವೈಲೆನ್ಸ್ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನ ಗಮನ ಸೆಳೆದಿದೆ. ಮೊದಲಾರ್ಧದಲ್ಲಿ ಪ್ರಮುಖ ಪಾತ್ರಗಳ ಪರಿಚಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ದ್ವಿತೀಯಾರ್ಧದಲ್ಲಿ ಪವರ್ ಪ್ಯಾಕ್ಡ್ ಮಾಸ್ ಮತ್ತು ಎಮೋಷನಲ್ ದೃಶ್ಯಗಳು ಇವೆ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ ಕೆಲವು ನೆಗೆಟಿವ್ ರಿವ್ಯೂಗಳೂ ಹರಿದಾಡುತ್ತಿದ್ದು, ಅವುಗಳನ್ನು ನೋಡಿ ನಿರ್ಧಾರಕ್ಕೆ ಬರದೆ ಸಿನಿಮಾ ನೋಡಿ ಅಭಿಪ್ರಾಯ ರೂಪಿಸಿಕೊಳ್ಳಿ ಎಂದು ಯಶ್ ಅಭಿಮಾನಿಗಳು ಹೇಳುತ್ತಿದ್ದಾರೆ.
ನೀವು ‘ಟಾಕ್ಸಿಕ್’ ನೋಡಿದ್ರಾ? ಸಿನಿಮಾ ಹೇಗನಿಸಿತು? ಕಾಮೆಂಟ್‌ನಲ್ಲಿ ತಿಳಿಸಿ
ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ದುರ್ಗಮ ಶಿರಾಡಿ ಘಾಟಿ ರೈಲು ಮಾರ್ಗದಲ್ಲಿ ವಂದೇ ಭಾರತ್‌ನ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಘಾಟಿ ಪ್ರದೇಶದಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ವಿಶೇಷ 20 ಬೋಗಿಗಳ ವಂದೇ ಭಾರತ್ ರೈಲನ್ನು ಸಿದ್ಧಪಡಿಸಲಾಗಿದೆ.
ಪ್ರಾಯೋಗಿಕ ಸಂಚಾರದ ವೇಳೆ ರೈಲಿನ ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ಘಾಟಿ ಮಾರ್ಗದಲ್ಲಿನ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ಪರೀಕ್ಷೆ ಯಶಸ್ವಿಯಾದ ಬಳಿಕ ಈ ಮಾರ್ಗದಲ್ಲಿ ವಂದೇ ಭಾರತ್‌ನ ಅಧಿಕೃತ ಸಂಚಾರ ಮತ್ತು ವೇಳಾಪಟ್ಟಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಮುಂದಿನ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
ಓಣಂ ಹಬ್ಬದ ಸಂಭ್ರಮಕ್ಕೆ ಬೆಂಗಳೂರಿನಲ್ಲಿ ತಂತ್ರಜ್ಞಾನದ ಹೊಸ ಸ್ಪರ್ಶ!
ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಮಾಲ್‌ನಲ್ಲಿ ಮೂಡಿಬಂದಿರುವ ‘Moving Pookalam’ ನೋಡುಗರ ಗಮನ ಸೆಳೆಯುತ್ತಿದೆ. ಸಾಂಪ್ರದಾಯಿಕ ಹೂವಿನ ರಂಗೋಲಿಗೆ ಚಲನೆಯ ವಿನೂತನ ಕಲ್ಪನೆ ಸೇರಿಸಿ ರೂಪಿಸಿರುವ ಈ ಆಕರ್ಷಕ ಪೂಕ್ಕಳಂ, ಓಣಂ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ.
ಮಂತ್ರಿ ಸ್ಕ್ವೇರ್ ಮಾಲ್, ಮಲ್ಲೇಶ್ವರ, ಬೆಂಗಳೂರು
20/08/2026
AA₹THIKA SAMVADA – ವಿಕಸಿತ ಭಾರತಕ್ಕಾಗಿ ವಿದ್ಯಾವಂತ ಹೂಡಿಕೆದಾರರು
ಹೂಡಿಕೆ ಜಾಗೃತಿ ಮತ್ತು ಆರ್ಥಿಕ ಅರಿವು ಕುರಿತು ನಡೆಯುವ ವಿಶೇಷ ಸಂವಾದ ಕಾರ್ಯಕ್ರಮಕ್ಕೆ ನಿಮಗೆ ಆತ್ಮೀಯ ಆಹ್ವಾನ.
ದಿನಾಂಕ: 29 ಆಗಸ್ಟ್ 2026
ಸಮಯ: ಸಂಜೆ 6:00 ಗಂಟೆಯಿಂದ
ಸ್ಥಳ: ಹೋಟೆಲ್ ರಾಮ, ಬಿ.ಎಂ. ರಸ್ತೆ, ಹಾಸನ
ರಾಜೇಂದ್ರ ಬೆಂಡಿ
Zonal Manager, ABSL AMC Ltd.
ಅವರೊಂದಿಗೆ ವಿಶೇಷ ಸಂವಾದ.
ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆ ಇದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:
98444 40194 / 88617 68672
ನಿಮ್ಮ ಉಪಸ್ಥಿತಿಯನ್ನು ಆತ್ಮೀಯವಾಗಿ ನಿರೀಕ್ಷಿಸುತ್ತೇವೆ.
Click here to claim your Sponsored Listing.
Location
Category
Website
Address
Sanjana Plaza, #74/2, Elephant Rock Road, 4th Floor, Jayanagar 3rd Block
Bangalore
560011
Opening Hours
| Monday | 10am - 6pm |
| Tuesday | 10am - 6pm |
| Wednesday | 10am - 6pm |
| Thursday | 10am - 6am |
| Friday | 10am - 6pm |